Ranga Pooja

Code: KAT-RAN-27

3000.00
Description:
ಕಟೀಲು ದೇವರಿಗೆ, ಪರಿವಾರ ದೇವರಿಗೆ ಸಹಿತವಾದ ಪೂಜೆಯೇ ರಂಗಪೂಜೆ. ನಿತ್ಯ ಗರಿಷ್ಟ ೧೨ ರಂಗಪೂಜೆ ನಡೆಯಲ್ಪಡುವುದು. ಬೆಳಗ್ಗಿನ ಪಂಚಾಮೃತ ಅಭಿಷೇಕದಿಂದ ಸಂಕಲ್ಪವಾಗಿ ರಾತ್ರಿ ರಂಗಪೂಜೆ ನಡೆಯುವುದು (ದೇವರಿಗೆ ಆವರಣ ದೇವತೆಗಳು, ಬಲಿ ದೇವತೆಗಳು ಹಾಗೂ ಪರಿವಾರ ದೇವರುಗಳು ಸಹಿತ ಆಗಮೋಕ್ತ ಪೂಜೆ, ನೈವೇದ್ಯಾದಿಗಳು ಸಹಿತ ಬಲಿ ಸಹಿತ ಪೂಜೆ) ದೇವರಿಗೆ ಕಡುಬು, ಅಪ್ಪ, ನೈವೇದ್ಯ, ಪಾಯಸ, ಹಿಂಗಾರ ಹೂವಿನ ಅಲಂಕಾರ, ತೆಂಗಿನಕಾಯಿ ನೈವೇದ್ಯ, ೫ ಸಾಲುಗಳ ದೀಪಗಳನ್ನು ದೇವರ ಎಡು ಬದಿಗಳಲ್ಲಿ ಹಚ್ಚುವುದು, ದೇವರ ಒಳಗೆ ಮಹಾನೆವೇದ್ಯ ಭಕ್ಷಾö್ಯದಿಗಳ ಸಮರ್ಪಣೆ ಆದರೆ ಮತ್ತಿನ ಪ್ರಧಾನಪರಿವಾರ ದೇವರು ವನಶಾಸ್ತಾರ, ಗಣಪತಿ ದೇವರಿಗೂ ನೈವೇದ್ಯ ಸಮರ್ಪಣೆ ಪೂಜೆ ನಡೆಯಬೇಕು. ಎಲ್ಲಾ ಆವರಣ ಬಲಿದೇವರುಗಳಿಗೆ ದೇವರ ಗರ್ಭಗುಡಿಯ ದ್ವಾರದಿಂದ ಮಂಟಪದವರೆಗೆ ೧೯ ಲಿಂಗಾಕಾರದ ನೈವೇದ್ಯ ರಾಶಿ, ಅಪ್ಪ, ಕಡುಬು, ಹಿಂಗಾರ, ಹೂವು, ತೆಂಗಿನಕಾಯಿಹೂಳು, ವೀಳ್ಯದೆಲೆ, ಅಡಿಕೆ ನೈವೇದ್ಯ ಮಾಡಿ ನೈವೇದ್ಯ ಕಾಲದಲ್ಲಿ ಪೂಜಾಹೋಮ ಮಾಡಿ, ದೇವರ ಬಲ ಎಡ ಬದಿಗಳಲ್ಲಿ ೫ ಮೇಲಂತಸ್ತಿನ ಸಾಲುಗಳೊಂದಿಗೆ ೫ ವಿಭಾಗವಾಗಿ ೫x೫x೫ ರ ದೀಪಸಾಲುಗಳನ್ನು ಹಚ್ಚಿ ದೇವರ ಪೂಜೆ ಆದನಂತರ ಬಲಿದೇವತೆಗಳಿಗೆ ಬಲಿ ಹಾಕಬೇಕು. ಇದು ದೇವರ ವಿಶೇಷ ಪೂಜೆ. ಈ ಪೂಜೆಯಿಂದ ಅನಾರೋಗ್ಯ ಪೀಡಿತರು ಸುಖವಂತರು ಆಗುವರು, ಸಾಂಪತ್ತಿಕ ಸಮಸ್ಯೆಯವರು ಸಂಪತ್ತನ್ನು ಹೊಂದುವರು, ಸಂತಾನಾದಿಗಳ ಪ್ರಾಪ್ತಿ ಹೀಗೆ ಈ ರಂಗಪೂಜೆಯಿAದ ಅನುಗ್ರಹ ಲಭಿಸುವುದು.
0 5

Details

ಕಟೀಲು ದೇವರಿಗೆ, ಪರಿವಾರ ದೇವರಿಗೆ ಸಹಿತವಾದ ಪೂಜೆಯೇ ರಂಗಪೂಜೆ. ನಿತ್ಯ ಗರಿಷ್ಟ 12 ರಂಗಪೂಜೆ ನಡೆಯಲ್ಪಡುವುದು. ಬೆಳಗ್ಗಿನ ಪಂಚಾಮೃತ ಅಭಿಷೇಕದಿಂದ ಸಂಕಲ್ಪವಾಗಿ ರಾತ್ರಿ ರಂಗಪೂಜೆ ನಡೆಯುವುದು (ದೇವರಿಗೆ ಆವರಣ ದೇವತೆಗಳು, ಬಲಿ ದೇವತೆಗಳು ಹಾಗೂ ಪರಿವಾರ ದೇವರುಗಳು ಸಹಿತ ಆಗಮೋಕ್ತ ಪೂಜೆ, ನೈವೇದ್ಯಾದಿಗಳು ಸಹಿತ ಬಲಿ ಸಹಿತ ಪೂಜೆ) ದೇವರಿಗೆ ಕಡುಬು, ಅಪ್ಪ, ನೈವೇದ್ಯ, ಪಾಯಸ, ಹಿಂಗಾರ ಹೂವಿನ ಅಲಂಕಾರ, ತೆಂಗಿನಕಾಯಿ ನೈವೇದ್ಯ, ೫ ಸಾಲುಗಳ ದೀಪಗಳನ್ನು ದೇವರ ಎಡು ಬದಿಗಳಲ್ಲಿ ಹಚ್ಚುವುದು, ದೇವರ ಒಳಗೆ ಮಹಾನೆವೇದ್ಯ ಭಕ್ಷಾö್ಯದಿಗಳ ಸಮರ್ಪಣೆ ಆದರೆ ಮತ್ತಿನ ಪ್ರಧಾನಪರಿವಾರ ದೇವರು ವನಶಾಸ್ತಾರ, ಗಣಪತಿ ದೇವರಿಗೂ ನೈವೇದ್ಯ ಸಮರ್ಪಣೆ ಪೂಜೆ ನಡೆಯಬೇಕು. ಎಲ್ಲಾ ಆವರಣ ಬಲಿದೇವರುಗಳಿಗೆ ದೇವರ ಗರ್ಭಗುಡಿಯ ದ್ವಾರದಿಂದ ಮಂಟಪದವರೆಗೆ 19 ಲಿಂಗಾಕಾರದ ನೈವೇದ್ಯ ರಾಶಿ, ಅಪ್ಪ, ಕಡುಬು, ಹಿಂಗಾರ, ಹೂವು, ತೆಂಗಿನಕಾಯಿಹೂಳು, ವೀಳ್ಯದೆಲೆ, ಅಡಿಕೆ ನೈವೇದ್ಯ ಮಾಡಿ ನೈವೇದ್ಯ ಕಾಲದಲ್ಲಿ ಪೂಜಾಹೋಮ ಮಾಡಿ, ದೇವರ ಬಲ ಎಡ ಬದಿಗಳಲ್ಲಿ ೫ ಮೇಲಂತಸ್ತಿನ ಸಾಲುಗಳೊಂದಿಗೆ ೫ ವಿಭಾಗವಾಗಿ ೫x೫x೫ ರ ದೀಪಸಾಲುಗಳನ್ನು ಹಚ್ಚಿ ದೇವರ ಪೂಜೆ ಆದನಂತರ ಬಲಿದೇವತೆಗಳಿಗೆ ಬಲಿ ಹಾಕಬೇಕು. ಇದು ದೇವರ ವಿಶೇಷ ಪೂಜೆ. ಈ ಪೂಜೆಯಿಂದ ಅನಾರೋಗ್ಯ ಪೀಡಿತರು ಸುಖವಂತರು ಆಗುವರು, ಸಾಂಪತ್ತಿಕ ಸಮಸ್ಯೆಯವರು ಸಂಪತ್ತನ್ನು ಹೊಂದುವರು, ಸಂತಾನಾದಿಗಳ ಪ್ರಾಪ್ತಿ ಹೀಗೆ ಈ ರಂಗಪೂಜೆಯಿAದ ಅನುಗ್ರಹ ಲಭಿಸುವುದು.

Timings

ಪ್ರತಿನಿತ್ಯ ಆಗುವುದು. ವಾರ್ಷಿಕ ಉತ್ಸವ ಕಾಲದಲ್ಲಿ 9 ದಿನ ಏಕದಶೀ ದಿನ ಕೆಲವು ವಿಶೇಷ ಸಂದರ್ಭಗಳಲ್ಲಿ ಆಗುವುದಿಲ್ಲ.
ಸಮಯ: ರಾತ್ರಿ 7.೦೦ ರಿಂದ 8-45 ರ ವರೆಗೆ

Prerequsite

N/A

Prasadam

ಕಡುಬು, ಅಪ್ಪ, ತೆಂಗಿನಕಾಯಿ, ಬಾಳೆಹಣ್ಣು, ವೀಳ್ಳದೆಲೆ, ಅಡಿಕೆ, ದೇವರ ಶೇಷವಸ್ತç.

Reviews

Write Your Review

Rating :