ತಾಂತ್ರಿಕ ಜಗತ್ತಿನ ಗುಮ್ಮನಿಂದ ಕಟೀಲಮ್ಮ ರಕ್ಷಿಸಲಿ - ಡಾ. ಸಂಕಮಾರ್

ದನದ ಹಾಲನ್ನು ನೀರಾಗಿ ಹರಿಸಿದ ಕಟೀಲಮ್ಮ ನಮ್ಮೆಲ್ಲರ ಹೃದಯದ ದೇವರು. ಕುಂಬಾರರು ಮಾಡುವ ಅನ್ನದ ಪಾತ್ರೆಯಲ್ಲಿ, ನೇಕಾರರು ಮಾನ ಮುಚ್ಚುವ ಬಟ್ಟೆ ತಯಾರಿಸುವಲ್ಲಿ, ಸಾಯ್ಬರಿಂದ ದೂಜಣ್ಣ ಕೊಂಡು ತಂದ ಮಲ್ಲಿಗೆಯ ಪರಿಮಳದಲ್ಲಿ, ಮೊಗವೀರರು ಬಲೆ ಬೀಸಿ ಹಿಡಿದ ಮೀನಿನ ಸಂಪತ್ತಿನಲ್ಲಿ, ತಾಯಿ ಕಟೀಲಮ್ಮ ಇದ್ದಾರೆ ಎಂದು ತುಳು ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್ ಹೇಳಿದರು. ಕಟೀಲು ಬ್ರಹ್ಮಕಲಶೋತ್ಸವದ ಅಂಗವಾಗಿ ಭ್ರಾಮರೀ ಸಭಾಂಗಣದಲ್ಲಿ ಶನಿವಾರ ನಡೆದ ಕೋಟಿ ಜಪ ಯಜ್ಞದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡಲ್ದ ಉಳ್ಳಾಲ್ತಿ ಕುರಿತು ಉಪನ್ಯಾಸ ನೀಡಿದರು. ಕಟೀಲಮ್ಮನ ಸೌಂದರ್ಯವನ್ನು ಕಾಣುವ ಕಾತರದಿಂದ ಘಟ್ಟದಿಂದ ಕಡಲಿನ ತನಕ ಮಕ್ಕಳು, ಮಹಿಳೆಯರು, ಪುರುಷರು ಎಂಬ ಬೇಧವಿಲ್ಲದೆ ಬರುತ್ತಿರುವ ಸಾಗರದ ಅಲೆಗಳಂತಹ ಜನಸಂದೋಹ ಅದ್ಭುತವಾದುದು. ರಕ್ಕಸರನ್ನು ಕೊಂದು ಸಜ್ಜನರನ್ನು ಕಾಪಾಡಿದ ದುರ್ಗೆ ತಾಂತ್ರಿಕ ಜಗತ್ತಿನಿಂದ ಹೆದರಿದ ಮಕ್ಕಳಾದ ನಮ್ಮ ಹೃದಯದಲ್ಲಿ ಕೂತು ರಕ್ಷಿಸಲಿ ಎಂದು ಡಾ. ಸಂಕಮಾರ್ ಹೇಳಿದರು. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ವಿದ್ಯೆ ವಿನಯದಿಂದ ದೇವರ ಅನುಗ್ರಹ ಸಿಗುತ್ತದೆ ನಮ್ಮಲ್ಲಿನ ಅಹಂಕಾರ ತಾಮಸ ಗುಣಗಳನ್ನು ವರ್ಜಿಸಬೇಕು ಎಂದರು. ಕಟೀಲು ದೇವಳಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಮಾಣಿಲ ಮೋಹನದಾಸ ಸ್ವಾಮೀಜಿ, ಮಡಂತ್ಯಾರು ಧರ್ಮದರ್ಶಿ ರೌದ್ರನಾಥೇಶ್ವರ ದೇವಳದ ಎನ್.ರವಿ, ಕಟೀಲು ದೇವಳ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ಮಂಗಳೂರು ಬ್ಯಾಂಕ್ ಆಫ್ ಬರೋಡ ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ಎಂ. ಜೆ ನಾಗರಾಜ, ಮಂಗಳೂರು ಕೆನರಾ ಬ್ಯಾಂಕ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ಯೋಗೀಶ್ ಆಚಾರ್ಯ, ಕಾರ್ಪೋರೇಶನ್ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ಪಿ.ವಿ.ಭಾರತಿ, ಮುಂಬಯಿ ಉದ್ಯಮಿ ಪೆರ್ಮುದೆ ಅಶೋಕ ಶೆಟ್ಟಿ, ಕಟೀಲು ಬ್ರಹ್ಮಕಲಶೋತ್ಸವ ಬೆಂಗಳೂರು ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಕಿಶೋರ್ ಶೆಟ್ಟಿ, ಉಡುಪಿ ಶ್ರೀ ಶಾರದೋತ್ಸವ ಸಮಿತಿ (ರಿ) ಅಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ, ನಮ್ಮ ಕುಡ್ಲ ವಾಹಿನಿ ಮಂಗಳೂರು ನಿರ್ದೇಶಕ ಲೀಲಾಕ್ಷ ಕರ್ಕೆರಾ, ಮುಂಬಯಿ ಉದ್ಯಮಿ ಇನ್ನ ಕೆಳಗಿನ ಮನೆ ಪ್ರವೀಣ್ ಜಿ. ಶೆಟ್ಟಿ, ಪದ್ಮನೂರು ನೀಲೇಶ್ ಶೆಟ್ಟಿಗಾರ್, ಬೆಂಗಳೂರು ಜಗದೀಶ ರೆಡ್ಡಿ, ಅಂತರಾಷ್ಟ್ರೀಯ ನರರೋಗ ತಜ್ಞ ಡಾ. ವೆಂಕಟರಮಣ ಬೆಂಗಳೂರು, ಬೆಂಗಳೂರು ಕೈಗಾರಿಕೋದ್ಯಮಿ ಬದ್ರೀನಾಥ್ ಕಾಮತ್, ಪಡುಬಿದ್ರೆ ಖಡ್ಗೇಶ್ವರಿ ದೇವಳದ ಅಧ್ಯಕ್ಷ ವೈ. ಎನ್. ರಾಮಚಂದ್ರ ರಾವ್, ಮಂಗಳೂರು ಮುಗ್ರೋಡಿ ಕನ್ಸಟ್ರಕ್ಷನ್‍ನ ಸುಧಾಕರ ಶೆಟ್ಟಿ ಮುಗ್ರೋಡಿ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉಪಸ್ಥಿತರಿದ್ದರು. ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಭಾಸ್ಕರದಾಸ್ ಎಕ್ಕಾರು ವಂದಿಸಿದರು. ರಾಜೇಂದ್ರ ಎಕ್ಕಾರು ಸಂಮಾನಿತರ ಪಟ್ಟಿ ವಾಚಿಸಿದರು. ದಯಾನಂದ ಕಟೀಲು ಕಾರ್ಯಕ್ರಮ ನಿರೂಪಿಸಿದರು.
0 5

Details

ದನದ ಹಾಲನ್ನು ನೀರಾಗಿ ಹರಿಸಿದ ಕಟೀಲಮ್ಮ ನಮ್ಮೆಲ್ಲರ ಹೃದಯದ ದೇವರು. ಕುಂಬಾರರು ಮಾಡುವ ಅನ್ನದ ಪಾತ್ರೆಯಲ್ಲಿ, ನೇಕಾರರು ಮಾನ ಮುಚ್ಚುವ ಬಟ್ಟೆ ತಯಾರಿಸುವಲ್ಲಿ, ಸಾಯ್ಬರಿಂದ ದೂಜಣ್ಣ ಕೊಂಡು ತಂದ ಮಲ್ಲಿಗೆಯ ಪರಿಮಳದಲ್ಲಿ, ಮೊಗವೀರರು ಬಲೆ ಬೀಸಿ ಹಿಡಿದ ಮೀನಿನ ಸಂಪತ್ತಿನಲ್ಲಿ, ತಾಯಿ ಕಟೀಲಮ್ಮ ಇದ್ದಾರೆ ಎಂದು ತುಳು ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್ ಹೇಳಿದರು.
ಕಟೀಲು ಬ್ರಹ್ಮಕಲಶೋತ್ಸವದ ಅಂಗವಾಗಿ ಭ್ರಾಮರೀ ಸಭಾಂಗಣದಲ್ಲಿ ಶನಿವಾರ ನಡೆದ ಕೋಟಿ ಜಪ ಯಜ್ಞದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡಲ್ದ ಉಳ್ಳಾಲ್ತಿ ಕುರಿತು ಉಪನ್ಯಾಸ ನೀಡಿದರು.
ಕಟೀಲಮ್ಮನ ಸೌಂದರ್ಯವನ್ನು ಕಾಣುವ ಕಾತರದಿಂದ ಘಟ್ಟದಿಂದ ಕಡಲಿನ ತನಕ ಮಕ್ಕಳು, ಮಹಿಳೆಯರು, ಪುರುಷರು ಎಂಬ ಬೇಧವಿಲ್ಲದೆ ಬರುತ್ತಿರುವ ಸಾಗರದ ಅಲೆಗಳಂತಹ ಜನಸಂದೋಹ ಅದ್ಭುತವಾದುದು. ರಕ್ಕಸರನ್ನು ಕೊಂದು ಸಜ್ಜನರನ್ನು ಕಾಪಾಡಿದ ದುರ್ಗೆ ತಾಂತ್ರಿಕ ಜಗತ್ತಿನಿಂದ ಹೆದರಿದ ಮಕ್ಕಳಾದ ನಮ್ಮ ಹೃದಯದಲ್ಲಿ ಕೂತು ರಕ್ಷಿಸಲಿ ಎಂದು ಡಾ. ಸಂಕಮಾರ್ ಹೇಳಿದರು.
ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ವಿದ್ಯೆ ವಿನಯದಿಂದ ದೇವರ ಅನುಗ್ರಹ ಸಿಗುತ್ತದೆ ನಮ್ಮಲ್ಲಿನ ಅಹಂಕಾರ ತಾಮಸ ಗುಣಗಳನ್ನು ವರ್ಜಿಸಬೇಕು ಎಂದರು.
ಕಟೀಲು ದೇವಳಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.
ಮಾಣಿಲ ಮೋಹನದಾಸ ಸ್ವಾಮೀಜಿ, ಮಡಂತ್ಯಾರು ಧರ್ಮದರ್ಶಿ ರೌದ್ರನಾಥೇಶ್ವರ ದೇವಳದ ಎನ್.ರವಿ, ಕಟೀಲು ದೇವಳ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ಮಂಗಳೂರು ಬ್ಯಾಂಕ್ ಆಫ್ ಬರೋಡ ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ಎಂ. ಜೆ ನಾಗರಾಜ, ಮಂಗಳೂರು ಕೆನರಾ ಬ್ಯಾಂಕ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ಯೋಗೀಶ್ ಆಚಾರ್ಯ, ಕಾರ್ಪೋರೇಶನ್ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ಪಿ.ವಿ.ಭಾರತಿ, ಮುಂಬಯಿ ಉದ್ಯಮಿ ಪೆರ್ಮುದೆ ಅಶೋಕ ಶೆಟ್ಟಿ, ಕಟೀಲು ಬ್ರಹ್ಮಕಲಶೋತ್ಸವ ಬೆಂಗಳೂರು ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಕಿಶೋರ್ ಶೆಟ್ಟಿ, ಉಡುಪಿ ಶ್ರೀ ಶಾರದೋತ್ಸವ ಸಮಿತಿ (ರಿ) ಅಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ, ನಮ್ಮ ಕುಡ್ಲ ವಾಹಿನಿ ಮಂಗಳೂರು ನಿರ್ದೇಶಕ ಲೀಲಾಕ್ಷ ಕರ್ಕೆರಾ, ಮುಂಬಯಿ ಉದ್ಯಮಿ ಇನ್ನ ಕೆಳಗಿನ ಮನೆ ಪ್ರವೀಣ್ ಜಿ. ಶೆಟ್ಟಿ, ಪದ್ಮನೂರು ನೀಲೇಶ್ ಶೆಟ್ಟಿಗಾರ್, ಬೆಂಗಳೂರು ಜಗದೀಶ ರೆಡ್ಡಿ, ಅಂತರಾಷ್ಟ್ರೀಯ ನರರೋಗ ತಜ್ಞ ಡಾ. ವೆಂಕಟರಮಣ ಬೆಂಗಳೂರು, ಬೆಂಗಳೂರು ಕೈಗಾರಿಕೋದ್ಯಮಿ ಬದ್ರೀನಾಥ್ ಕಾಮತ್, ಪಡುಬಿದ್ರೆ ಖಡ್ಗೇಶ್ವರಿ ದೇವಳದ ಅಧ್ಯಕ್ಷ ವೈ. ಎನ್. ರಾಮಚಂದ್ರ ರಾವ್, ಮಂಗಳೂರು ಮುಗ್ರೋಡಿ ಕನ್ಸಟ್ರಕ್ಷನ್‍ನ ಸುಧಾಕರ ಶೆಟ್ಟಿ ಮುಗ್ರೋಡಿ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉಪಸ್ಥಿತರಿದ್ದರು.
ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಭಾಸ್ಕರದಾಸ್ ಎಕ್ಕಾರು ವಂದಿಸಿದರು. ರಾಜೇಂದ್ರ ಎಕ್ಕಾರು ಸಂಮಾನಿತರ ಪಟ್ಟಿ ವಾಚಿಸಿದರು. ದಯಾನಂದ ಕಟೀಲು ಕಾರ್ಯಕ್ರಮ ನಿರೂಪಿಸಿದರು.

Reviews

Write Your Review

Rating :