ಕಟೀಲಿಗೆ ಬಂದ ಕೇಂದ್ರ ರಕ್ಷಣಾ ಸಚಿವ ರಾಜಾನಾಥ್ ಸಿಂಗ್

ಬ್ರಹ್ಮಕಲಶೋತ್ಸವದ ಸಡಗರದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸೋಮವಾರ ಸಂಜೆ ಕೇಂದ್ರ ರಕ್ಷಣಾ ಸಚಿವ ರಾಜಾನಾಥ್ ಸಿಂಗ್ ಭೇಟಿ ನೀಡಿದರು. ಮಂಗಳೂರಿನಿಂದ ಕಟೀಲಿಗೆ ಆಗಮಿಸಿದ ರಾಜಾನಾಥ್ ಸಿಂಗ್ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್ ಇದ್ದರು. ಸಚಿವರನ್ನು ದೇವಸ್ಥಾನದ ಆಡಳಿತ ಮಂಡಳಿಯ ಅಧÀ್ಯಕ್ಷ ಕೊಡೆತ್ತೂರುಗುತ್ತು ಸನತ್‍ಕುಮಾರ್ ಶೆಟ್ಟಿ, ವಾಸುದೇವ ಆಸ್ರಣ್ಣ ಸ್ವಾಗತಿಸಿದರು. ಈ ಸಂದರ್ಭ ದೇವರಿಗೆ ಆರತಿ ಬೆಳಗಲಾಯಿತು. ಕ್ಷೇತ್ರಪುರಾಣ, ಬಂಗಾರದ ಧ್ವಜಸ್ತಂಭ, ಚಿನ್ನದ ರಥದ, ಕಟೀಲು ಕ್ಷೇತ್ರದಲ್ಲಿ ನಡೆಯುವ ಅನ್ನದಾನ, ವಿದ್ಯಾದಾನಗಳ ಬಗ್ಗೆ ಅರ್ಚಕರು ವಿವರಿಸಿದಾಗ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಗಭರ್À ಗುಡಿಗೆ ಪ್ರದಕ್ಷಿಣೆ ಬಂದರು. ಸಚಿವರಿಗೆ ತೀರ್ಥ ಪ್ರಸಾದ ಹಾಗೂ ದೇವರ ಶೇಷ ವಸ್ತ್ರ ಹಾಗೂ ಬೆಳ್ಳಿಯ ದೇವರ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು. ಈ ಸಂದಭರ್À ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪÀಸ್ಥಿತರಿದ್ದರು. ಈ ಸಂದಭರ್À ಪೆÇೀಲಿಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಕಳೆದ ವರ್ಷ ಪೊಳಲಿಯಲ್ಲಿ ಬ್ರಹ್ಮಕಲಶೋತ್ಸವ ನಡೆದಾಗ ಅಲ್ಲಿಗೂ ಸಚಿವ ರಾಜನಾಥ ಸಿಂಗ್ ಭೇಟಿ ನೀಡಿದ್ದನ್ನು ಸ್ಮರಿಸಬಹುದು.
0 5

Details

ಬ್ರಹ್ಮಕಲಶೋತ್ಸವದ ಸಡಗರದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸೋಮವಾರ ಸಂಜೆ ಕೇಂದ್ರ ರಕ್ಷಣಾ ಸಚಿವ ರಾಜಾನಾಥ್ ಸಿಂಗ್ ಭೇಟಿ ನೀಡಿದರು. ಮಂಗಳೂರಿನಿಂದ ಕಟೀಲಿಗೆ ಆಗಮಿಸಿದ ರಾಜಾನಾಥ್ ಸಿಂಗ್ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್ ಇದ್ದರು.ಸಚಿವರನ್ನು ದೇವಸ್ಥಾನದ ಆಡಳಿತ ಮಂಡಳಿಯ ಅಧÀ್ಯಕ್ಷ ಕೊಡೆತ್ತೂರುಗುತ್ತು ಸನತ್‍ಕುಮಾರ್ ಶೆಟ್ಟಿ, ವಾಸುದೇವ ಆಸ್ರಣ್ಣ ಸ್ವಾಗತಿಸಿದರು. ಈ ಸಂದರ್ಭ ದೇವರಿಗೆ ಆರತಿ ಬೆಳಗಲಾಯಿತು. ಕ್ಷೇತ್ರಪುರಾಣ, ಬಂಗಾರದ ಧ್ವಜಸ್ತಂಭ, ಚಿನ್ನದ ರಥದ, ಕಟೀಲು ಕ್ಷೇತ್ರದಲ್ಲಿ ನಡೆಯುವ ಅನ್ನದಾನ, ವಿದ್ಯಾದಾನಗಳ ಬಗ್ಗೆ ಅರ್ಚಕರು ವಿವರಿಸಿದಾಗ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಗಭರ್À ಗುಡಿಗೆ ಪ್ರದಕ್ಷಿಣೆ ಬಂದರು. ಸಚಿವರಿಗೆ ತೀರ್ಥ ಪ್ರಸಾದ ಹಾಗೂ ದೇವರ ಶೇಷ ವಸ್ತ್ರ ಹಾಗೂ ಬೆಳ್ಳಿಯ ದೇವರ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು. ಈ ಸಂದಭರ್À ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪÀಸ್ಥಿತರಿದ್ದರು. ಈ ಸಂದಭರ್À ಪೆÇೀಲಿಸರು ಬಿಗಿ ಬಂದೋಬಸ್ತ್ ಮಾಡಿದ್ದರು.
ಕಳೆದ ವರ್ಷ ಪೊಳಲಿಯಲ್ಲಿ ಬ್ರಹ್ಮಕಲಶೋತ್ಸವ ನಡೆದಾಗ ಅಲ್ಲಿಗೂ ಸಚಿವ ರಾಜನಾಥ ಸಿಂಗ್ ಭೇಟಿ ನೀಡಿದ್ದನ್ನು ಸ್ಮರಿಸಬಹುದು.

Education Institutions

Special Students

Reviews

Write Your Review

Rating :