☀
ತುಲಾಭಾರ ಅಂದರೆ ನಮ್ಮದಾದ ಕಷ್ಟಪರಂಪರೆ ದೂರ ಮಾಡಲು ಇಷ್ಟಾರ್ಥಪಡಕೊಳ್ಳಲು ಇರುವ ಪ್ರಾಯಶ್ಚತ್ತಾತ್ಮಕ ಸೇವೆ. ನಮ್ಮನ್ನೇ ದೇವರಿಗೆ ಅರ್ಪಣೆ ಮಾಡುವುದು. ನಮ್ಮ ಭಾರದ ಸೊತ್ತನ್ನು ದೇವರಿಗೆ ಎದುರಿಗೆ ತೂಕ ಮಾಡಿ ಅರ್ಪಿಸುವುದು ಮಕ್ಕಳು ಆಗದವರು ಮಗು ಆದ ನಂತರದಲ್ಲಿ ತಾಯಿ ಮಗು ಒಟ್ಟಿಗೆ, ದಾಂಪತ್ಯ ಜೀವನ ಸುಖಮಾಯವಾಗಲು ಗಂಡ ಹೆಂಡತಿ ಒಟ್ಟಿಗೆ ಹಾಗೂ ಸ್ವಂತವಾಗಿ ಮಾಡುವುದಾಗಿದೆ. ಎಳ್ಳೆಣ್ಣೆ, ತುಪ್ಪ, ಜೇನುತುಪ್ಪ, ಅಕ್ಕಿ ತೆಂಗಿನಕಾಯಿ, ಸಕ್ಕರೆ, ಬೆಲ್ಲ, ನಾಣ್ಯ ಇತ್ಯಾದಿ ಸೊತ್ತುಗಳನ್ನು ಬಳಸಬಹುದು.
☀
ತುಲಾಭಾರದ ವಸ್ತುಗಳು ದೇವಳದಲ್ಲೇ ಲಭ್ಯವಿರುತ್ತದೆ. ಸೇವಾರ್ಥಿಗಳು ತರುವುದಾದರೆ ತರಬಹುದು. 200.00 ರೂಪಾಯಿಯು ಕೇವಲ ತುಲಾಭಾರ ಕಾಣಿಕೆಯಾಗಿರುತ್ತದೆ. ವಸ್ತುವಿನ ಮೊತ್ತವನ್ನು ವಸ್ತು ಮತ್ತು ಅದರ ತೂಕಕ್ಕೆ ಅನುಗುಣವಾಗಿ ನಿಗದಿಪಡಿಸಲಾಗುತ್ತದೆ.