Description:
ರೂ 20000 ಕ್ಕಿಂತ ಮೇಲ್ಪಟ್ಟ ಅನ್ನದಾನವನ್ನು ‘’ಮಹಾಅನ್ನದಾನ”ವೆಂದು ಪರಿಗಣಿಸಲಾಗುವುದು, “ಪರೇಷಾಂ ಉಪಕಾರಾಥರ್ರಂ ಯಜ್ಜೀವತಿ ಸಜೀವತಿ” ಮತ್ತೊಬ್ಬನ ಏಳಿಗೆಗಾಗಿ ಸಹಾಯ ಹಸ್ತ ಕೊಡುವವನು ನಿಜವಾಗಿ ಜೀವಂತನಾಗಿ ಇದ್ದಾನೆ ಎನ್ನುತ್ತದೆ ಉಪನಿಷತ್ತು. ಉಪಕಾರ ಮಾಡದವರು ದಾನ ಮಾಡದವನು ಜೀವ ಇದ್ದು ಸತ್ತಂತೆ ಸರ್ವಪಾಪ, ದೋಷ, ಅನಾರೋಗ್ಯ ಪರಿಹಾರವಾಗಿ ಎಲ್ಲಾ ವಿಧದ ಇಷ್ಟಾರ್ಥಗಳು ಸಿದ್ದಿ ಆಗುವುದು. ಹಾಗೂ ತಾಯಿಯು ಮಕ್ಕಳು ಹೊಟ್ಟೆ ತುಂಬಾ ತಿನಿಸುವ ಆಸೆ ಉಳ್ಳವಳು ನಮ್ಮ ತಾಯಿಗೂ ತಾಯಿಯಾದ ಜಗನ್ಮಾತೆ ಕಟೀಲು ದುರ್ಗಾಪರಮೇಶ್ವರಿಗೆ ಅನ್ನದಾನ ಮಹಾನ್ನದಾನ ಮಾಡಿದರೆ ಪೂರ್ಣಾನುಗ್ರಹ ಕೊಡುವಳು ಹಾಗೂ “ವಿದ್ಯಾವಿಹೀನ: ಪಶು: ಸಮಾನ:” ವಿದ್ಯೆ ಇಲ್ಲದವನು ಪಶುವಿಗೆ ಸಮಾನನು ಎಲ್ಲಾ ಬಡಬsಗ್ಯರು ವಿದ್ಯಾವಂತರಾಗಬೇಕೆAದು 1ನೇ ತರಗತಿಯಿಂದ ಪಿ.ಯು.ಸಿ, ಬಿಕಾಂ, ಬಿಎ, ಕಾಲೇಜು ಸಂಸ್ಕೃತ ಕಾಲೇಜಿನಲ್ಲಿ ಒಟ್ಟು 3000ಕ್ಕಿಂತ ಮೇಲ್ಪಟ್ಟು ಗ್ರಾಮೀಣ ವಿದ್ಯಾರ್ಥಿಗಳು ಕೇವಲ ಗವರ್ನ್ಮೆಂಟ್ ಫೀಸ್‌ನ್ನು ಮಾತ್ರ ಕಟ್ಟಿ ಉತ್ತಮ ರೀತಿಯ ಅನ್ನದಾನದೊಂದಿಗೆ ವಿದ್ಯಾರ್ಜನೆ ಪಡೆದುಕೊಳ್ಳುತ್ತಿದ್ದಾರೆ. ಈ ದಾನ ಸೇವೆ ಅತ್ಯಂತ ಮಹತ್ವದ್ದಾಗಿದೆ. ದೇವರು ವಿಶೇಷವಾಗಿ ಅನುಗ್ರಹಿಸುತ್ತಾರೆ. ಚೆಕ್ ಮೂಲಕ ಧನ ಪಾವತಿ ಮಾಡಿದರೆ 80ಜಿ ಆದಾಯ ತೆರಿಗೆ ರಿಯಾಯಿತಿ ಇದೆ.