ಮಾ.14. ಕಟೀಲು ದೇವಳದಲ್ಲಿ ರಾಶಿ ಪೂಜೆ
ಕಟೀಲು : ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳದಲ್ಲಿ ವರ್ಷಂಪ್ರತಿಯ ಸಂಪ್ರದಾಯದಂತೆ ಮಾರ್ಚ್ 14 ಭಾನುವಾರ ಮೀನ ಸಂಕ್ರಾಂತಿಯಂದು ರಾಶಿಪೂಜಾ ಮಹೋತ್ಸವವು ನಡೆಯಲಿದೆ. ಮುಂಜಾನೆ ದೇವರಿಗೆ ಹನ್ನೆರಡು ರಾಶಿ ಕಲಶಗಳ ಅಭಿಷೇಕ, ಪುಣ್ಯಾಹನಾಂದೀ ಸಮಾರಾಧನೆ ಬಳಿಕ ರಾಶಿಚಕ್ರದ ಮಂಡಲದಲ್ಲಿ ಹನ್ನೆರಡು ರಾಶಿಗಳನ್ನು ಆವಾಹಿಸಿದ ಬಳಿಕ ಊರ ವಿಪ್ರರಿಂದ ಹರಿನಾಮ ಸಂಕೀರ್ತನೆಯು ಆರಂಭವಾಗಿ ಮರುದಿನದ ವರೆಗೆ ನಿರಂತರ ನಡೆಯಲಿದೆ. ಮಧ್ಯಾಹ್ನ ಆರು ಹಾಗೂ ರಾತ್ರಿ ಆರು ರಾಶಿಗಳಿಗೆ ದೇವರ ಒಳಗೆ ವಿಶೇಷ ಪೂಜೆ ನಡೆಯಲಿದೆ. ಈ ಪ್ರಯುಕ್ತ ಚಂಡಿಕಾಹೋಮ ಸಂಪನ್ನಗೊಳ್ಳಲಿದ್ದು ಮಧ್ಯಾಹ್ನ ದೇವರ ಮಹಾಪೂಜೆ ಬಳಿಕ ಪಲ್ಲಪೂಜೆ ನಡೆದು ನಂತರ ಮಾರಿ ಓಡಿಸುವ ಕಾರ್ಯಕ್ರಮ, ಬಳಿಕ ಆರಾಧನೆ, ರಾತ್ರಿ ಮಹಾರಂಗಪೂಜೆ ( ಭೂತಬಲಿರಂಗಪೂಜೆ)ನಡೆದ ಬಳಿಕ ಉತ್ಸವಬಲಿ ನಡೆದು ದೇವರಿಗೆ ಚಂದ್ರಮಂಡಲ ರಥೋತ್ಸವ ನಡೆಯಲಿದೆ. ಮಾರ್ಚ್ 13 ರ ಶನಿವಾರ ಸಂಜೆ ಏಳಕ್ಕೆ ತೋರಣ ಮುಹೂರ್ತ ಹಾಗೂ ತರಕಾರಿ ಮುಹೂರ್ತ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ