☀
ಜೇನುಕೃಷಿ ಲಾಭದಾಯಕ : ರಾಧಾಕೃಷ್ಣ ಪುತ್ತೂರು
☀
ಕಟೀಲು : ಜೇನು ಕೃಷಿಯನ್ನು ಉದ್ಯೋಗವನ್ನಾಗಿ ಮಾಡಿದರೆ ಲಾಭದಾಯಕ. ಮನೆಯ ಉಪಯೋಗಕ್ಕೆ ಎಂದು ಮಾಡಿದರೆ ಅತ್ಯಂತ ಶುದ್ಧವಾದ ಆರೋಗ್ಯಪೂರ್ಣವಾದ ಜೇನನ್ನು ನಾವೇ ಉತ್ಪಾದಿಸಿದ ತೃಪ್ತಿ ಸಾಧ್ಯ ಎಂದು ಐನೂರಕ್ಕೂ ಹೆಚ್ಚು ಜೇನುಗೂಡುಗಳ ಮೂಲಕ ಯಶಸ್ವಿ ಜೇನುಕೃಷಿಗಾರರಾದ ರಾಧಾಕೃಷ್ಣ ಪುತ್ತೂರು ಹೇಳಿದರು.
☀
ಅವರು ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ತೋಟಗಾರಿಕಾ ಇಲಾಖೆಯಡಿ ಜಿಲ್ಲಾ ಪಂಚಾಯತ್ ಯೋಜನೆಯಡಿ ನಡೆದ ಜೇನುಕೃಷಿ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
☀
ಶಿಬಿರ ಉದ್ಘಾಟಿಸಿದ ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಪ್ರಕೃತಿಯು ಮನುಷ್ಯನಿಗೆ ಒಳಿತನ್ನೇ ಕೊಡುತ್ತದೆ ಎಂಬುದಕ್ಕೆ ಜೇನು ಕೂಡ ಒಂದು ಉದಾಹರಣೆ. ಅದನ್ನು ಬೆಳೆಸಿ ಬಳಸುವುದಕ್ಕೆ ಪ್ರೇರಣೆ ಸಿಗಲಿ ಎಂದರು.
☀
ಮೂಲ್ಕಿ ತಹಶೀಲ್ದಾರ್
☀
ಕಮಲಮ್ಮ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಪ್ರವೀಣ್ ಕೆ. ಇಲಾಖಾ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
☀
ಸಹಾಯಕ ತೋಟಗಾರಿಕಾ ಅಧಿಕಾರಿ ಯುಗೇಂದ್ರ
☀
ಜೇನು ಅನುವುಗಾರ ಪ್ರವೀಣ್
☀
ಖ್ಯಾತ ವೈದ್ಯ ಡಾ. ಭಾಸ್ಕರಾನಂದ ಕುಮಾರ್, ಮೂಲ್ಕಿ ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ಪುರುಷೋತ್ತಮ ಕೋಟ್ಯಾನ್ ವೇದಿಕೆಯಲ್ಲಿದ್ದರು.
☀
ಅಕ್ಟೋಬರ್ 3 ರಂದು ಬೆಟ್ಟಂಪಾಡಿಯ ಜೇನುಕೃಷಿ ಸಾಧಕ ಮನಮೋಹನ್ ಅವರಲ್ಲಿಗೆ ತರಬೇತಿ ಪಡೆಯಲು ಇಚ್ಛಿಸಿ 70 ಶಿಬಿರಾರ್ಥಿಗಳು ಹೆಸರು ನೋಂದಾಯಿಸಿದರು.