ಕೋಟಿಜಪಯಜ್ಞ ಸಂಕಲ್ಪ

*||ಶ್ರೀಃ||* *||ನಾಮಕೋಟಿಜಪಯಜ್ಞಃ||* *|| ಶ್ರೀದುರ್ಗಾಪರಮೇಶ್ವರೀ ಪ್ರಸೀದತು ||* ಜಗತ್ತಿನ ತಾಯಿಯಾಗಿರತಕ್ಕಂತಹ ಮಹಾಚೈತನ್ಯರೂಪಿಣಿದುರ್ಗೆಯನ್ನು ವೇದಗಳಲ್ಲಿ , ಶಾಸ್ತ್ರ-ಪುರಾಣಗಳಲ್ಲಿ ಜಾತವೇದಾಃ , ಜಾತವೇದಸೀ ಎಂಬುವುದಾಗಿ ಋಷಿ-ಮುನಿಗಳು ಸ್ತುತಿಸಿದ್ದಾರೆ . ಜೀವಿಗಳು ಹುಟ್ಟಿದ ತಕ್ಷಣ ಪ್ರಕೃತಿಸ್ವರೂಪಿಣಿಯಾಗಿ ಆ ಜೀವಿಗಳೊಳಗೆ ಸೇರಿಕೊಂಡು ಚೈತನ್ಯವನ್ನು ಪ್ರಕಟಗೊಳಿಸುವವಳು . *" ಯಥಾ ನ್ಯಗ್ರೋಧಬೀಜಸ್ಥಃ ಶಕ್ತಿರೂಪೋ ಮಹಾದ್ರುಮಃ | * *ತಥಾ ಹೃದಯಬೀಜಸ್ಥಂ ಜಗದೇತಚ್ಚರಾಚರಮ್ || " * _ ಅನುತ್ತರತ್ರಿಂಶಿಕಾ " ಮಹಾವೃಕ್ಷವು ಆಲದ ಬೀಜದಲ್ಲಿ ಶಕ್ತಿರೂಪದಲ್ಲಿರುವಂತೆ ಚರಾಚರಜಗತ್ತು ಹೃದಯಬೀಜದಲ್ಲಿರುವುದು . " ಅಂದರೆ , ಸರ್ವಜಗತ್ತಿನ ಬೀಜಕ್ಕೆ ಹೃದಯವೆಂದು ಹೆಸರು ; ಅದರಲ್ಲಿ ದೇವಿಯು ಜಗತ್ತಿನ ರೂಪದಿಂದ ಸ್ಥಿತಳಾಗಿರುವವಳು . ಆದ್ದರಿಂದಲೇ ಆ ಜಗನ್ಮಾತೆಯು " ಹೃದಯಸ್ಥಾ " ಎಂಬ ಹೆಸರಿನಿಂದ ಜ್ಞಾನಿಗಳಿಂದ ಸ್ತುತಿಸಲ್ಪಟ್ಟಿದ್ದಾಳೆ . ಭಕ್ತರ ಹೃದಯದಲ್ಲಿದ್ದುಕೊಂಡು ಅವರ ಕಷ್ಟ-ಕಾರ್ಪಣ್ಯಗಳನ್ನು , ದುಃಖ-ದುಮ್ಮಾನಗಳನ್ನು ಹೊಗಲಾಡಿಸಿ ಅವರನ್ನು ನಿರಂತರ ರಕ್ಷಿಸುತ್ತಾ ಅವರ ಇಷ್ಟಾರ್ಥಗಳನ್ನು ಅನುಗ್ರಹಿಸುತ್ತಾಳೆ . ಆಸ್ತಿಕಭಕ್ತಜನರೇ , ದಿನಾಂಕ 22 .1. 2020 ರಿಂದ ಮೊದಲ್ಗೊಂಡು ದಿನಾಂಕ 3 .2 . 2020 ರ ವರೆಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿಯ ಬ್ರಹ್ಮಕಲಶಮಹೋತ್ಸವವು ನೆರವೇರಲಿದೆ . *" ಯತ್ರೈತತ್ ಪಠ್ಯತೇ ಸಮ್ಯಕ್.....ಸಾನ್ನಿಧ್ಯಂ ತತ್ರ ಮೇ ಸ್ಥಿತಮ್ || "* " ನನ್ನ ಮಂದಿರದಲ್ಲಿ ನನ್ನ ಚರಿತ್ರೆಯನ್ನು ಚೆನ್ನಾಗಿ ಮತ್ತು ನಿತ್ಯವೂ ಪಠಿಸಲ್ಪಟ್ಟರೆ ಆ ಮಂದಿರವನ್ನು ನಾನೆಂದಿಗೂ ಬಿಟ್ಟುಹೋಗಲಾರೆನು , ಅಲ್ಲಿ ನನ್ನ ಸಾನ್ನಿಧ್ಯವು ಸ್ಥಿರವಾಗಿರುತ್ತದೆ . " ಎಂಬುವುದಾಗಿ ದೇವಿಯೇ ಅವಳ ಭಕ್ತರಿಗೆ ಕೊಟ್ಟ ಅಭಯ ವಾಕ್ಯ . *" .....ಸಾ ಯಾಚಿತಾ ಚ ವಿಜ್ಞಾನಂ ತುಷ್ಟಾ ಋದ್ಧಿಂ ಪ್ರಯಚ್ಛತಿ || "* " ಬೇಡಿದರೆ ಅವಳು ವಿಶೇಷಜ್ಞಾನವನ್ನೂ , ಸಂತುಷ್ಟಳಾದರೆ ಸಮೃದ್ಧಿಯನ್ನು ಅನುಗ್ರಹಿಸುತ್ತಾಳೆ . " *" ಸ್ತುತಾ ಸಂಪೂಜಿತಾ ಪುಷ್ಪೈರ್ಧೂಪಗಂಧಾದಿಭಿಸ್ತಥಾ | * *ದದಾತಿ ವಿತ್ತಂ ಪುತ್ರಾಂಶ್ಚ ಮತಿಂ ಧರ್ಮೇ ಗತಿಂ ಶುಭಾಮ್ || " * " ಅವಳನ್ನು ಸ್ತುತಿಸಿದರೆ , ಪುಷ್ಪಧೂಪಗಂಧ ಮೊದಲಾದುವುಗಳಿಂದ ಪೂಜಿಸಿದರೆ ಐಶ್ವರ್ಯವನ್ನೂ , ಸತ್ಪುತ್ರರನ್ನೂ , ಧರ್ಮಬುದ್ಧಿಯನ್ನೂ , ಶುಭಗತಿಯನ್ನೂ(ಒಳ್ಳೆಯ ದಾರಿ) ಅನುಗ್ರಹಿಸುತ್ತಾಳೆ . " ಎಂಬುವುದಾಗಿ ಋಷಿಯ ಅನುಭವದ ಮಾತು . ಪುರಾಣಕಾಲದಲ್ಲಿ , ಮಹಿಷಾಸುರ , ಧೂಮ್ರಲೋಚನ , ಚಂಡಮುಂಡ , ರಕ್ತಬೀಜ , ಶುಂಭ-ನಿಶುಂಭರೇ ಮೊದಲಾದ ಅಸುರರಿಂದ ದೇವತೆಗಳು ಕಷ್ಟ-ದುಃಖಗಳಿಗೊಳಪಡಲು , ಆ ಹೊತ್ತಲ್ಲಿ ಎಲ್ಲಾ ದೇವತೆಗಳ ಒಕ್ಕೊರಳಿನ ಆರ್ತದನಿಗೆ ಮಹಾಚೈತನ್ಯರೂಪಿಣಿದುರ್ಗೆಯು ಆವಿರ್ಭವಿಸಿ , ದುರುಳರೆಲ್ಲರನ್ನು ಸಂಹರಿಸಿ , ದೇವತೆಗಳನ್ನು ಅನುಗ್ರಹಿಸಿದ್ದಾಳೆ . ಈ ದೃಷ್ಟಿಯಲ್ಲಿ , ಮಾರ್ಕಂಡೇಯಪುರಾಣದಲ್ಲಿ ಉದ್ಧರಿಸಲ್ಪಟ್ಟ ದೇವೀಮಾಹಾತ್ಮ್ಯೆಯ ಸ್ತುತಿಶ್ಲೋಕವೊಂದನ್ನು ಭಕ್ತರೆಲ್ಲರೂ ಸೇರಿ ಕೋಟಿಸಂಖ್ಯೆಗಳಲ್ಲಿ ಜಪಿಸುವುದು ಎಂದು ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ಸಂಕಲ್ಪಿಸಿರುತ್ತೇವೆ . " ಸಪ್ತಶತೀ" ಎಂಬುವುದಾಗಿ ಕರೆಯಲ್ಪಡುವ ಏಳುನೂರು ಮಂತ್ರಗಳಿರುವ , ದೇವಿಯ ಪರಾಕ್ರಮವನ್ನು , ವೈಭವವನ್ನು , ಅನುಗ್ರಹವನ್ನು ಕೊಂಡಾಡುವ " ದೇವೀಮಾಹಾತ್ಮ್ಯಮ್ " ಎಂಬ ಗ್ರಂಥದಲ್ಲಿ ಉದ್ಧರಿಸಲ್ಪಟ್ಟ " ಜ್ಞಾನಿನಾಮಪಿ ಚೇತಾಂಸಿ....." ಈ ಮೊದಲಾದ ಏಳು ಮಂತ್ರಗಳು (ಸಪ್ತಶ್ಲೋಕಗಳು) ವಿಶೇಷ ಫಲವನ್ನು ಕೊಡುವಂತಹದ್ದು ಎಂದು ತಂತ್ರಗ್ರಂಥಗಳಲ್ಲಿ ಹೇಳಲ್ಪಟ್ಟಿವೆ . ಆ ಏಳುಮಂತ್ರಗಳಲ್ಲಿಯೂ ಪ್ರಸಿದ್ಧವಾದ *" ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |* *ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋsಸ್ತುತೇ || "* (ಹೇ ಸರ್ವಮಂಗಲಗಳ ಮಾಂಗಲ್ಯಸ್ವರೂಪಳೇ , ಶಿವೆಯೇ , ಸರ್ವಾಭೀಷ್ಟಗಳನ್ನೂ ಸಾಧಿಸಿಕೊಡುವವಳೇ , ಶರಣುಹೊಂದಲು ಯೋಗ್ಯಳೇ , ತ್ರಿನಯನಳೇ , ಶ್ವೇತವರ್ಣದವಳೇ , ನಾರಾಯಣಿಯೇ , ನಿನಗೆ ನಮನವು.) ಈ ಮಂತ್ರವನ್ನೇ ನಾಮಕೋಟಿಜಪಯಜ್ಞಕ್ಕಾಗಿ ನಿಶ್ಚಯಿಸಿರುತ್ತೇವೆ . ಆ ಪ್ರಯುಕ್ತ ಶ್ರೀಭ್ರಮರಾಂಬೆಯ ಭಕ್ತರೆಲ್ಲರೂ ದೇವಸ್ಥಾನದಲ್ಲಿ ಅರ್ಚಕವರ್ಗದವರ ಮೂಲಕ ಸಂಕಲ್ಪಮಾಡಿಸಿಕೊಂಡು ಪ್ರಾರ್ಥನೆ ಮಾಡಿ ಕೋಟಿಯಜ್ಞದ ಅಂಗವಾಗಿ ಜಪ ಆರಂಭಿಸಬೇಕು.ನಂತರ ಪ್ರತಿದಿನವೂ ಶುಚಿರ್ಭೂತರಾಗಿ ಈ ಶ್ಲೋಕವನ್ನು ಯಥಾಶಕ್ತಿ ಜಪಿಸಿ ಲೆಕ್ಕವನ್ನಿಡುತ್ತಾ ಬರಬೇಕು. ಶ್ರೀದೇವಿಯ ಬ್ರಹ್ಮಕಲಶ ಮಹೋತ್ಸವ ಸಮಯದಲ್ಲಿ ದಿನಾಂಕ 2 . 2 . 2020 ರಂದು ದೇವಿಯ ಮೂಲಸ್ಥಾನ ಭ್ರಾಮರೀವನದಲ್ಲಿ(ಕುದುರು) ತ್ರಿಕಾಲಪೂಜಾಪುರಸ್ಸರ ಶ್ರೀದೇವಿಗೆ ನಡೆಯುವ ಕೋಟಿಯಜ್ಞದಲ್ಲಿ ಭಾಗವಹಿಸಿ ದೇವಳದಿಂದ ನೀಡುವ ಶುದ್ಧ ಕುಂಕುಮವನ್ನು ಹಿಡಿದುಕೊಂಡು ಸಾಮೂಹಿಕವಾಗಿ ಈ ಮಂತ್ರವನ್ನೇ ಜಪಿಸಬೇಕು. ಸಾಯಂಕಾಲದ ಹೊತ್ತಿಗೆ ಆ ಕುಂಕುಮವನ್ನು ಅರ್ಚಕರಿಗೆ ನೀಡಿ ಆ ಕುಂಕುಮವನ್ನು ದುರ್ಗೆಗೆ ಸಮರ್ಪಿಸಿ , ಕೋಟಿನಾಮಜಕೋಟಿನಾಮಜಪಯಜ್ಞವನ್ನು ಪರಿಸಮಾಪ್ತಿ ಮಾಡಲಾಗುವುದು. ಈ ಮೂಲಕ ಶ್ರೀದೇವಿಯ ಕೃಪೆಗೆ ಪಾತ್ರರಾಗಿ ಕೃತಾರ್ಥರಾಗಬೇಕಾಗಿ ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ . *ಸಂಕಲ್ಪಃ _ ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು. ಕೃಷ್ಣ ಕೃಷ್ಣ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಆದ್ಯಬ್ರಹ್ಮಣಃ ದ್ವಿತೀಯಪರಾರ್ಧೇ ಶ್ವೇತವರಾಹಕಲ್ಪೇ ವೈವಸ್ವನ್ವಂತರೇ ಅಷ್ಟಾವಿಂಶತಿತಮೇ ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭಾರತವರ್ಷೇ ಭರತಖಂಡೇ ಮೇರೋಃ ದಕ್ಷಿಣೇ ಪಾರ್ಷ್ವೇ ಗೋದಾವರ್ಯಾಃ ದಕ್ಷಿಣೇ ಕೂಲೇ ಶಾಲಿವಾಹನಶಕೇ ಬೌದ್ಧಾವತಾರೇ ಪರಶುರಾಮಕ್ಷೇತ್ರೇ ನಂದಿನ್ಯಾಃ ತೀರೇ ಭ್ರಾಮರ್ಯಾಃ ಅವತಾರಕ್ಷೇತ್ರೇ ಅಸ್ಮಿನ್ ವರ್ಷೇ ವರ್ತಮಾನೇ ವಿಕಾರಿನಾಮ ಸಂವತ್ಸರಸ್ಯ ಉತ್ತರಾಯಣೇ ಮಕರೇ ಅರ್ಕೇ ಆಚರಿಷ್ಯಮಾಣಬ್ರಹ್ಮಕಲಶೋತ್ತವ ಸಮಯೇ ಶಿಶಿರರ್ತೌ ಮಾಘಮಾಸೇ ಶುಕ್ಲಪಕ್ಷೇ ಅಷ್ಟಮ್ಯಾಮ್ ತಿಥೌ ಶ್ರೀದುರ್ಗಾಂತರ್ಗತ ಶ್ರೀಲಕ್ಷ್ಮೀನರಸಿಂಹಪ್ರೇರಣಯಾ ಪ್ರೀತ್ಯರ್ಥಂ , ಮಮ ಸಮಸ್ತ ದುರಿತೋಪಶಮನಾರ್ಥಂ , ಸಂಪದಭಿವೃದ್ಧ್ಯರ್ಥಂ , ಗ್ರಾಮರಾಷ್ಟ್ರೇ ಯೋಗಕ್ಷೇಮಾಭಿವೃದ್ಧ್ಯರ್ಥಂ ಶ್ರೀದುರ್ಗಾಯಾಃ ಕೋಟಿನಾಮಜಪಯಜ್ಞಾಂಗತ್ವೇನ ಯಥಾಶಕ್ತಿ ಸರ್ವಮಂಗಲಮಾಂಗಲ್ಯೇ ಇತಿ ಮಂತ್ರ ಜಪಾಖ್ಯಂ ಕರ್ಮ ಕರಿಷ್ಯೇ || * ನಿತ್ಯವೂ ಈ ರೀತಿಯಾಗಿ ಸಂಕಲ್ಪಿಸಿ ಜಪವನ್ನು ಪ್ರಾರಂಭಿಸಬೇಕು . ಜಪವನ್ನು ಬೆಳಿಗ್ಗೆ ಅಥವಾ ಸಾಯಂಕಾಲದ ಹೊತ್ತು ಮಾಡಬೇಕು . || ಶ್ರೀ ಜಗನ್ಮಾತ್ರೇ ನಮಃ ||
4.75 5

Details

ಜಪವನ್ನು ಪ್ರಾರಂಭಿಸಿ ಜಪಸಮಾಪ್ತಿ ಆಗಿ ಕೋಟಿಯಜ್ಞ ಮುಗಿಯುವ ಅಂದರೆ ಕುಂಕುಮವನ್ನು ಮಧು-ಮಾಂಸಾದಿಗಳನ್ನು ತ್ಯಜಿಸಿ , ಶುಕ್ರವಾರದಂದು ಒಪ್ಪೊತ್ತಿನ(ಒಂದು ಹೊತ್ತು ) ಆಹಾರ ಸೇವನೆಯನಿಯಮದಲ್ಲಿರಬೇಕು .
ಹೆಂಗಳೆಯರು ರಜಸ್ವಲೆಯಾಗುವ ಸಂದರ್ಭ ನಾಲ್ಕುದಿನ ಜಪಮಾಡದೆ ಐದನೇ ದಿನ ಮುಂದುವರಿಸಬೇಕು.

Education Institutions

Special Students

Reviews

Write Your Review

Rating :
Nivyabv
17/12/2019 3:35 PM 4.5
Shri Durgaparameshwari!!!!!!!!!!!!!!!!!!!!!!!!
Yogeshwari
15/12/2019 3:58 PM 5
Very nice.