SHRI DURGAPARAMESHWARI TEMPLE, KATEEL

A DAY IN THE TEMPLE

Temple opening and closing time: 5.30am and 9.30 pm (10.30pm on Friday)

Time of the Rituals Name of the Rituals

3.00 A.M

onwards –

Every morning the sanctum is cleaned up and the morning Abhisheka is solemnized. Ushahkalapooja, Udvarthanapooja, Elaneeru Abhisheka, Panchamruthabhisheka, Navakabhisheka that is followed by the ritual decoration of the Idol consummating in the Mahapooja
5.30 A.M – The sanctum is opened for the devotees for Darshana
12.00 Noon – Mahapooja.
7.00 P.M – The Pradosha Pooja (the worship at dusk) is performed. Then follows a series of rituals: Kumkumarchana, Durganamaskara, Shahasranama, Alankarapooja, Hoovinapooja (flower worship), sevas service by devotees and finally the Mahapooja.
8.00 P.M – Twelve Rangapooja (a worship characterized by the lighting of small oil lamps both sides of the Shrine arranged in rows) is solemnized.
9.30 P.M – The shrine is closed for the day. Except Friday
10.30 P.M – Shrine is closed if it is Friday.

After both the (mid-day and night) Mahapoojas Prsadam meal is served. In the morning Rice Porridge (Ganji) also provided.

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕಟೀಲು

ಶ್ರೀ ದೇವಳದಲ್ಲಿ ಒಂದು ದಿನ

ಶ್ರೀ ದೇವಳವು ಪ್ರಾತಃಕಾಲ 5.30ಕ್ಕೆ ತೆರೆದು ರಾತ್ರಿ 9.30ಕ್ಕೆ ಮುಚ್ಚುತ್ತದೆ. (ಶುಕ್ರವಾರ ಹೊರತುಪಡಿಸಿ)

ವಿನಿಯೋಗಗಳ ಸಮಯ ವಿನಿಯೋಗಗಳ ವಿವರ
ಪ್ರಾತಃ 3.00 ರಿಂದ – ಪ್ರತಿದಿನ ಬೆಳಿಗ್ಗಿನ ಜಾವ ಗರ್ಭಗುಡಿ ಶುದ್ಧೀಕರಣಗೊಂಡು ಪ್ರಾತರಭಿಷೇಕ ನೆರವೇರುತ್ತದೆ. ನಂತರ ಉಷಃಕಾಲಪೂಜೆ, ಉದ್ವರ್ತನಪೂಜೆ, ಎಳನೀರು ಅಭಿಷೇಕ, ಪಂಚಾಮೃತಾಭಿಷೇಕ, ನವಕಾಭಿಷೇಕಗಳು ನೆರವೇರಿದ ನಂತರ ದೇವರ ಸಾಂಪ್ರದಾಯಕ ಅಲಂಕಾರವು ನಡೆಯುತ್ತದೆ.
ಪ್ರಾತಃ 5.30ರಿಂದ – ಭಕ್ತಾದಿಗಳ ದರ್ಶನಕ್ಕೆ ದೇವಳದ ಬಾಗಿಲು ತೆರೆದುಕೊಳ್ಳುತ್ತದೆ.
ಮಧ್ಯಾಹ್ನ 12.00ಕ್ಕೆ – ಮಹಾಪೂಜೆ
ಸಾಯಂಕಾಲ 7.00ಕ್ಕೆ – ಪ್ರದೋಷಪೂಜೆ (ಸಾಯಂ ಸಂಧ್ಯಾಪೂಜೆ) ನಡೆಯುತ್ತದೆ. ನಂತರ ದುರ್ಗಾನಮಸ್ಕಾರ, ಕುಂಕುಮಾರ್ಚನೆ, ಸಹಸ್ರನಾಮಾರ್ಚನೆ, ಅಲಂಕಾರ ಪೂಜೆ, ಹೂವಿನಪೂಜೆಗಳು ಕ್ರಮವತ್ತಾಗಿ ಜರಗಿ ಸೇವಾದಿಗಳ ಅಂತ್ಯದಲ್ಲಿ ಮಹಾಪೂಜೆ ನಡೆಯುತ್ತದೆ.
ರಾತ್ರಿ 8.00 ಕ್ಕೆ – ಹನ್ನೆರಡು ಸಂಖ್ಯೆಯಲ್ಲಿ ರಂಗಪೂಜೆ ಸೇವೆಗಳು ನೆರವೇರುತ್ತದೆ.
ರಾತ್ರಿ 9.30 ಕ್ಕೆ – ಶ್ರೀ ದೇವರ ಗರ್ಭಗುಡಿಯು ಮುಚ್ಚಿಕೊಳ್ಳುತ್ತದೆ. (ಶುಕ್ರವಾರ ಹೊರತುಪಡಿಸಿ)
ರಾತ್ರಿ 10.30 ಕ್ಕೆ – ಶುಕ್ರವಾರದಂದು ಗರ್ಭಗುಡಿಯು ಮುಚ್ಚಿಕೊಳ್ಳುತ್ತದೆ.

ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿಯ ಮಹಾಪೂಜೆಯ ನಂತರ ಶ್ರೀ ದೇವರ ಭೋಜನಪ್ರಸಾದವು ನಡೆಯುತ್ತದೆ. ಪ್ರತಿದಿನ ಬೆಳಿಗ್ಗೆ ಗಂಜಿಯೂಟವೂ ನಡೆಯುತ್ತದೆ.