ಕಟೀಲಿನಲ್ಲಿ ನೂತನ ಗೋಶಾಲೆ ಉದ್ಘಾಟನೆ

ಕಟೀಲಿನಲ್ಲಿ ನೂತನ ಗೋಶಾಲೆ ಉದ್ಘಾಟನೆ ಕಸಕಡ್ಡಿ ಹುಲ್ಲು ತಿಂದು ಹಾಲು ಕೊಡುವ ಗೋಮಾತೆ : ಪಲಿಮಾರು ಸ್ವಾಮೀಜಿ ಕಟೀಲು : ತಾಯಿಯ ಹಾಲು ತನ್ನ ಮಗುವಿಗೆ ಮಾತ್ರ. ಆದರೆ ಗೋಮಾತೆಯ ಹಾಲು ತನ್ನ ಕರುವಿಗೆ ಮಾತ್ರವಲ್ಲ ಎಲ್ಲರಿಗೂ ಸಿಗುತ್ತದೆ. ಹುಲ್ಲು ಕಸ ಕಡಿಗಳನ್ನು ತಿಂದ ದನ ಪವಿತ್ರ ಹಾಲನ್ನು ಕೊಡುವುದರಿಂದ ಅದು ಪೂಜನೀಯ ಎಂದು ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು. ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆವರಣದಲ್ಲಿ ನಡೆದ ನಂದಿನೀ ಗೋಶಾಲೆಯ ಉದ್ಘಾಟನೆ ಮತ್ತು ಕಪಿಲ ದನಕರುಗಳಿಗೆ ಗೋಪೂಜೆ ಮಾಡಿ ಮಾತನಾಡಿದರು. ಕಟೀಲಿನಲ್ಲಿ ಹರಿಯುವ ನದಿ ನಂದಿನೀ ಕಾಮಧೇನುವಿನ ಮಗಳು. ಹಾಗಾಗಿ ಇಲ್ಲಿ ಗೋಪೂಜೆ ವಿಶೇಷವಾದುದು ಎಂದರು. ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್, ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು, ಸನತ್ ಕುಮಾರ್ ಶೆಟ್ಟಿ, ಗಿರೀಶ್ ಶೆಟ್ಟಿ ಕಟೀಲು, ಅರ್ಚಕ ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಬಿಪಿನ್ ಪ್ರಸಾದ್ ಶೆಟ್ಟಿ ಮತ್ತಿತರರಿದ್ದರು.
0 5

Details

ಕಟೀಲಿನಲ್ಲಿ ನೂತನ ಗೋಶಾಲೆ ಉದ್ಘಾಟನೆ
ಕಸಕಡ್ಡಿ ಹುಲ್ಲು ತಿಂದು ಹಾಲು ಕೊಡುವ ಗೋಮಾತೆ : ಪಲಿಮಾರು ಸ್ವಾಮೀಜಿ
ಕಟೀಲು : ತಾಯಿಯ ಹಾಲು ತನ್ನ ಮಗುವಿಗೆ ಮಾತ್ರ. ಆದರೆ ಗೋಮಾತೆಯ ಹಾಲು ತನ್ನ ಕರುವಿಗೆ ಮಾತ್ರವಲ್ಲ ಎಲ್ಲರಿಗೂ ಸಿಗುತ್ತದೆ. ಹುಲ್ಲು ಕಸ ಕಡಿಗಳನ್ನು ತಿಂದ ದನ ಪವಿತ್ರ ಹಾಲನ್ನು ಕೊಡುವುದರಿಂದ ಅದು ಪೂಜನೀಯ ಎಂದು ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆವರಣದಲ್ಲಿ ನಡೆದ ನಂದಿನೀ ಗೋಶಾಲೆಯ ಉದ್ಘಾಟನೆ ಮತ್ತು ಕಪಿಲ ದನಕರುಗಳಿಗೆ ಗೋಪೂಜೆ ಮಾಡಿ ಮಾತನಾಡಿದರು.
ಕಟೀಲಿನಲ್ಲಿ ಹರಿಯುವ ನದಿ ನಂದಿನೀ ಕಾಮಧೇನುವಿನ ಮಗಳು. ಹಾಗಾಗಿ ಇಲ್ಲಿ ಗೋಪೂಜೆ ವಿಶೇಷವಾದುದು ಎಂದರು.
ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್, ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು, ಸನತ್ ಕುಮಾರ್ ಶೆಟ್ಟಿ, ಗಿರೀಶ್ ಶೆಟ್ಟಿ ಕಟೀಲು, ಅರ್ಚಕ ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಬಿಪಿನ್ ಪ್ರಸಾದ್ ಶೆಟ್ಟಿ ಮತ್ತಿತರರಿದ್ದರು.

Reviews

Write Your Review

Rating :