05 ಜನವರಿ 2020 ಬ್ರಹ್ಮಕಲಶೋತ್ಸವದ ಸಂಕೋಚ

ಶ್ರೀಕ್ಷೇತ್ರಕಟೀಲಿನ ಸದ್ಭಕ್ತರಿಗಾಗಿ ಇಂದು 5.1.2020 ರಂದು ಕಟೀಲಿನಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಸಂಕೋಚ ನಡೆದಿದೆ. ಸಂಕೋಚ ಅಂದರೆ ಎಲ್ಲ ಪರಿವಾರ ದೇವತೆಗಳನ್ನು ದೇವರ ಸಾನಿಧ್ಯದೊಂದಿಗೆ ಸೇರಿಸುವುದು. ಎರಡನೆಯದಾಗಿ ಇಡೀ ದೇವಾಲಯವನ್ನೆ ದೇವಿಯ ಸ್ಥೂಲಶರೀರ ಎಂದು ಕಲ್ಪಿಸಿ ಪ್ರತಿಷ್ಟಾಪನಾ ವಿಧಿ ನೆರವೇರಿರುವುದನ್ನು ಬದಲಿಸಿ ದೇವರ ಸ್ಥೂಲದೇಹವನ್ನೂ ಸಂಕುಚಿತ ಗೊಳಿಸಿ ಸಾನಿಧ್ಯಕ್ಕೇನೇ ಸೀಮಿತಗೊಳಿಸುವುದು. ಇಂದಿನಿಂದ ಹಲವಾರು ಜೀರ್ಣೋದ್ಧಾರಪ್ರಕ್ರಿಯೆಗಳನ್ನು ಆರಂಭಿಸಲಾಗುತ್ತದೆ. ದೇವಿಯು ಸ್ವಯಂಭೂಸನ್ನಿಧಾನವಾಗಿರುವುದರಿಂದ ಅದೇ ಸ್ಥಳದಲ್ಲಿರುತ್ತಾಳೆ ಆದರೂ ಸಂಕೋಚವಾದಲ್ಲಿ ಅರಮನೆಯ ದೇವಿಗೆ ಸಣ್ಣಕೋಣೆ ನೀಡಿದಂತೆ ಆಗುವುದರಿಂದ ಶಾಸ್ತ್ರದಲ್ಲೇ ಇದನ್ನು ಕ್ಲೇಶವಾಸ ಎಂದು ಕರೆಯುತ್ತಾರೆ. ಈ ಕಾರಣದಿಂದ ಈ ಸಮಯದಲ್ಲಿ ಯಜಮಾನ ವರ್ಗ, ಅರ್ಚಕವರ್ಗ,‌ ಊರವರು, ಪರವೂರ ಭಕ್ತರು ದೇವಿಯ ಬ್ರಹ್ಮಕಲಶೋತ್ಸವ ಆಗುವ ವರೆಗೆ ಕೆಲವೊಂದು ನಿಯಮಗಳಲ್ಲಿರಬೇಕಾಗುತ್ತದೆ ಎಂದು ಶಾಸ್ತ್ರದ ನುಡಿ. ಅವು ಹೀಗಿವೆ. 1. ದಿನಕ್ಕೊಂದು ಭಾರಿ ಮಾತ್ರ ಊಟ. 2. ನಮಗಿಷ್ಟವಾದ ವಸ್ತುವನ್ನು ತಿನ್ನದೇ ಉಳಿಯುವುದು ಅಥವಾ ಉಪಯೋಗಿಸದೇ ಉಳಿಯುವುದು. 3. ಬ್ರಹ್ಮಕಲಶದ ವರೆಗೆ ಮಾಂಸಾಹಾರ ಬಿಡುವುದು 4. ಬ್ರಹ್ಮಕಲಶೋತ್ಸವದ ಆರಂಭದ ದಿನ ಅಂದರೆ 22.1.2020 ರ ವರೆಗೆ ಗಡ್ಡ ಮೀಸೆಗಳನ್ನು ಉಳಿಸಿಕೊಳ್ಳುವುದು. ಭಕ್ತಾದಿಗಳು ಈ ಕ್ರಮಗಳನ್ನು ಅನುಸರಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ. ದೇವಳದ ಆಡಳಿತಮಂಡಳಿ
0 5

Details

ಶ್ರೀಕ್ಷೇತ್ರಕಟೀಲಿನ ಸದ್ಭಕ್ತರಿಗಾಗಿ
ಇಂದು 5.1.2020 ರಂದು ಕಟೀಲಿನಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಸಂಕೋಚ ನಡೆದಿದೆ. ಸಂಕೋಚ ಅಂದರೆ ಎಲ್ಲ ಪರಿವಾರ ದೇವತೆಗಳನ್ನು ದೇವರ ಸಾನಿಧ್ಯದೊಂದಿಗೆ ಸೇರಿಸುವುದು. ಎರಡನೆಯದಾಗಿ ಇಡೀ ದೇವಾಲಯವನ್ನೆ ದೇವಿಯ ಸ್ಥೂಲಶರೀರ ಎಂದು ಕಲ್ಪಿಸಿ ಪ್ರತಿಷ್ಟಾಪನಾ ವಿಧಿ ನೆರವೇರಿರುವುದನ್ನು ಬದಲಿಸಿ ದೇವರ ಸ್ಥೂಲದೇಹವನ್ನೂ ಸಂಕುಚಿತ ಗೊಳಿಸಿ ಸಾನಿಧ್ಯಕ್ಕೇನೇ ಸೀಮಿತಗೊಳಿಸುವುದು. ಇಂದಿನಿಂದ ಹಲವಾರು ಜೀರ್ಣೋದ್ಧಾರಪ್ರಕ್ರಿಯೆಗಳನ್ನು ಆರಂಭಿಸಲಾಗುತ್ತದೆ. ದೇವಿಯು ಸ್ವಯಂಭೂಸನ್ನಿಧಾನವಾಗಿರುವುದರಿಂದ ಅದೇ ಸ್ಥಳದಲ್ಲಿರುತ್ತಾಳೆ ಆದರೂ ಸಂಕೋಚವಾದಲ್ಲಿ ಅರಮನೆಯ ದೇವಿಗೆ ಸಣ್ಣಕೋಣೆ ನೀಡಿದಂತೆ ಆಗುವುದರಿಂದ ಶಾಸ್ತ್ರದಲ್ಲೇ ಇದನ್ನು ಕ್ಲೇಶವಾಸ ಎಂದು ಕರೆಯುತ್ತಾರೆ.
ಈ ಕಾರಣದಿಂದ ಈ ಸಮಯದಲ್ಲಿ ಯಜಮಾನ ವರ್ಗ, ಅರ್ಚಕವರ್ಗ,‌ ಊರವರು, ಪರವೂರ ಭಕ್ತರು ದೇವಿಯ ಬ್ರಹ್ಮಕಲಶೋತ್ಸವ ಆಗುವ ವರೆಗೆ ಕೆಲವೊಂದು ನಿಯಮಗಳಲ್ಲಿರಬೇಕಾಗುತ್ತದೆ ಎಂದು ಶಾಸ್ತ್ರದ ನುಡಿ. ಅವು ಹೀಗಿವೆ.
1. ದಿನಕ್ಕೊಂದು ಭಾರಿ ಮಾತ್ರ ಊಟ.
2. ನಮಗಿಷ್ಟವಾದ ವಸ್ತುವನ್ನು ತಿನ್ನದೇ ಉಳಿಯುವುದು ಅಥವಾ ಉಪಯೋಗಿಸದೇ ಉಳಿಯುವುದು.
3. ಬ್ರಹ್ಮಕಲಶದ ವರೆಗೆ ಮಾಂಸಾಹಾರ ಬಿಡುವುದು
4. ಬ್ರಹ್ಮಕಲಶೋತ್ಸವದ ಆರಂಭದ ದಿನ ಅಂದರೆ 22.1.2020 ರ ವರೆಗೆ ಗಡ್ಡ ಮೀಸೆಗಳನ್ನು ಉಳಿಸಿಕೊಳ್ಳುವುದು.
ಭಕ್ತಾದಿಗಳು ಈ ಕ್ರಮಗಳನ್ನು ಅನುಸರಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ದೇವಳದ ಆಡಳಿತಮಂಡಳಿ

Reviews

Write Your Review

Rating :